ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ.ಕರೀಂಖಾನ್
ಗಾಯನ: ಎಸ್.ಜಾನಕಿ

ನ್ಯಾಯವಿದೇನಮ್ಮ?
ಧರ್ಮವಿದೇನಮ್ಮ?
ಬಂದಿಹೆ ನಿನ್ನ ಚರಣದೊಳೆನ್ನ ಬಿನ್ನಹ ಕೇಳಮ್ಮ
ನಿರಾದಾರಿ ಯಾದೆ ನನ್ನ ಜೀವನ ನೋಡಮ್ಮ |೨|
ನ್ಯಾಯವಿದೇನಮ್ಮ?
ಧರ್ಮವಿದೇನಮ್ಮ?

ತವ ಚರಣ ನಂಬಿ ನಿಜಕರಣ ತುಂಬಿ ಭರದಿಂದ ಚಿಮ್ಮಿ ಬಂದೆನೆ
ಮಣ್ಣಯಿತೆನ್ನ ಸವಿಬಾಳ ಬಣ್ಣ ಜಗದಂಬೆ ಕುಂದಿ ನೊಂದೆನೆ
ಗತಿ ನೀನೆ ತೋರಮ್ಮ
ವರದಾನ ನೀಡಮ್ಮಾ!
ಚಿದಾನಂದ ಮಾಯೆ ನಿನ್ನ ಮೌನ ವಿದೇನಮ್ಮಾ?
ನ್ಯಾಯವಿದೇನಮ್ಮ?
ಧರ್ಮವಿದೇನಮ್ಮ?

ಪತಿದೇವ ಸತಿಯ ಜೀವ ಮುಡಿಯ ಕುಸುಮದಾನ
ನಿಜ ಯೌವನ್ನ ಸುಖ ಬಂದನ ಮಧುರ ಜೀವ ಮಾನ
ಹಣೆಯ ಚಂದನವು ಸುಮನ ಮನ ಮೋಹನ ಜಾಣ
ಪತಿ ದೇವನ ತೋರಿಸು ನಿ ಬಿಡು ಬಿಗುಮಾನ
ಆಣೆ ಇದೆ ಜನನಿ ನೀ ಆಲಿಸು ಭವಾನಿ!

ಧಗಧಗಧಗವೆನೆ ಪ್ರಳಯ ಜ್ವಾಲೆಯೆ ಜಗವ ತುಂಬಲೀ!
ಸುರವನ ಗಿರಿಗುಡುಗಾಡಿ ಧರಣಿ ಬಿರುದಿ ನುಂಗಿ ನಗಲೀ!
ನದಿ ನದಾಳಿ ಹೊಮ್ಮಿ ಲೋಕದೊಳ್ ನಾಶವನ್ನೆ ತರಲೀ!
ಮೃಡಾನಿ ಲಾಲಿಸು ನೀ, ಬಳಿಸಾರಿದೆ ನಾ ಜನನೀ!
ಚಂಡ ಮುಂಡ ದೈತ್ಯಾದಿ ನಾಷಿನಿ
ಶುಂಭ ನಿಶುಂಬ ನಿಶೂದಿನಿ
ಕರುಣೆ ತೋರು ಜನನಿ |೨|
ಜನನೀ! |೩|

Category: ಕನ್ನಡ ಚಿತ್ರಸಾಹಿತ್ಯ
Category: ಎಸ್.ಕೆ.ಕರೀಂಖಾನ್ ಸಾಹಿತ್ಯ
Category: ಸ್ವರ್ಣ ಗೌರಿ ಚಿತ್ರ